ಇತ್ತೀಚಿಗೆ ನಡೆದ ಘಟನೆ ಧಾರವಾಡದಲ್ಲಿ ನಡೆದ ಬೃಹತ್ ನಿರುದ್ಯೋಗ ಸಮಸ್ಯೆಯ ವಿರುದ್ಧದ ವಿದ್ಯಾರ್ಥಿಗಳ ಹೋರಾಟ ರಾಜ್ಯದಲ್ಲಿ ಹಲವು ಗೊಂದಲಗಳನ್ನ ಸೃಷ್ಟಿ ಮಾಡಿತ್ತು. ಇದೀಗ ಕರ್ನಾಟಕ ರಾಜ್ಯದ ಸ್ಪರ್ಧಾ ವಿದ್ಯಾರ್ಥಿಗಳಿಗೆ ಕರ್ನಾಟಕ ರಾಜ್ಯ ಸರ್ಕಾರವು ಸಿಹಿ ಸುದ್ದಿ ನೀಡಿದೆ. ಜಿಲ್ಲಾ ವಾರು ಕಾಲಿ ಹುದ್ದೆಗಳ ಕುರಿತು ಮಾಹಿತಿ ನೀಡಿರುವ ಪೊಲೀಸ್ ಇಲಾಖೆ ತನ್ನ ಸುತ್ತೋಲೆಯನ್ನ ಹೊರಡಿಸಿದೆ.
ಸುತ್ತೋಲೆ :-
ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವ ಕುರಿತು.
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಈ ಕಛೇರಿಯ ಉಲ್ಲೇಖಿತ ಪತ್ರಗಳನ್ನು ಗಮನಿಸಲು ಕೋರಲಾಗಿದೆ. ಸದರಿ ಪತ್ರಗಳಲ್ಲಿ 1650 ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ ಮತ್ತು 4114 ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳಿಗೆ ಸಂಬಂಧಪಟ್ಟ ಘಟಕಗಳಿಂದ ವರ್ಗಿಕರಣವನ್ನು ಪಡೆದು ನೇರ ನೇಮಕಾತಿಯ ಮೂಲಕ ಭರ್ತಿಮಾಡಲು ಕ್ರಮ ಕೈಗೊಳ್ಳುವಂತೆ ಕೋರಲಾಗಿತ್ತು ಹಾಗೂ ಘಟಕವಾರು ಹುದ್ದೆಗಳ ಹಂಚಿಕೆಯ ವಿವರವನ್ನು ಒದಗಿಸಲಾಗಿತ್ತು.

ಸದರಿ 1650 ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ ಮತ್ತು 4114 ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳನ್ನು
ಆಡಳಿತಾತ್ಮಕ ಕಾರಣಗಳಿಂದ ಮರು ಹಂಚಿಕೆಮಾಡಲಾಗಿದ್ದು, ಘಟಕವಾರು ಹುದ್ದೆಗಳ ಮರು ಹಂಚಿಕೆಯ ವಿವರವನ್ನು ಅನುಬಂಧ-ಅ ಮತ್ತು ಆ ರಲ್ಲಿ ಲಗತ್ತಿಸಿದೆ. ಹಾಗೂ ಸದರಿ ಹುದ್ದೆಗಳಿಗೆ ಸಂಬಂಧಿಸಿದಂತೆ ಸಂಬಂಧಪಟ್ಟ ಘಟಕಗಳಿಂದ ಪರಿಷ್ಕೃತ ವರ್ಗಿಕರಣವನ್ನು ಪಡೆದು ನೇಮಕಾತಿ ಪ್ರಕ್ರಿಯೆಯನ್ನು ಕೈಗೊಳ್ಳವಂತೆ ಕೋರಲಾಗಿದೆ.

ಡಿಜಿ ಮತ್ತು ಐಜಿಪಿ ರವರಿಂದ ಅನುಮೋದಿಸಲ್ಪಟ್ಟಿದೆ.